೧)
ತಪ್ಪು ನಂದೇ ಕಣೆ,
ನಾನು ಪ್ರೀತಿಸುವಾಗ
ಯೋಚಿಸಲಿಲ್ಲ;
ನೀನು ಪ್ರೀತಿಸಲಿಲ್ಲ
ಕೇವಲ ಯೋಚಿಸಿದೆ!
೨)
ಸಾಗರದ ಹೆಬ್ಬಂಡೆಗೆ
ಅಲೆಯೆಡೆಗಿನ ಪ್ರೀತಿ
ಕೊಂಚವೂ ಕೂಡ
ಕಡಿಮೆಯಾಗಿಲ್ಲ!
ಹುಡುಗಿಯರೇ,
ಅಲೆಯಂತೆ ನೀವೆಷ್ಟೇ
ಅಪ್ಪಳಿಸಿದರೂ;
ಹುಡುಗರು -
ಮತ್ತವರ ಪ್ರೀತಿಯೂ,
ಬಂಡೆಯಂತೆಯೇ,
'ಅಚಲ'
೩)
ಮೊನ್ನೆ ಸಂಜೆ,
ನವಿಲು ಗರಿಬಿಚ್ಚಿ
ಕುಣಿವ ಸಮಯಕೆ
ನೀನು ನೆನಪಾಗಿದ್ದೆ.
೪)
ಬಿದ್ದ ಮಳೆಹನಿ ಕೂಡ
ಸದ್ದಿಲ್ಲದೆಯೇ -
ಕೊಚ್ಚಿ ಹೋಯಿತು
ನನ್ನ ಕಣ್ಣೀರಂತೆ
೫)
ತುಂಬಾ ದಿನವಾಯ್ತು
ಅಂತ ಮಾಮೂಲು
ಜಾಗಕ್ಕೆ ಬಂದೆ,
ನೀನು ಬರಲಿಲ್ಲ!
೬)
ನಮ್ಮ ಕಾಂಪೌಂಡಿನ
ಗುಲಾಬಿ ಮನದುಂಬಿ
- ನಗುತ್ತಿದೆ,
ನಿನ್ನ ಕಂಡಿರಬೇಕು!
- ಪ್ರಸಾದ್
ತಪ್ಪು ನಂದೇ ಕಣೆ,
ನಾನು ಪ್ರೀತಿಸುವಾಗ
ಯೋಚಿಸಲಿಲ್ಲ;
ನೀನು ಪ್ರೀತಿಸಲಿಲ್ಲ
ಕೇವಲ ಯೋಚಿಸಿದೆ!
೨)
ಸಾಗರದ ಹೆಬ್ಬಂಡೆಗೆ
ಅಲೆಯೆಡೆಗಿನ ಪ್ರೀತಿ
ಕೊಂಚವೂ ಕೂಡ
ಕಡಿಮೆಯಾಗಿಲ್ಲ!
ಹುಡುಗಿಯರೇ,
ಅಲೆಯಂತೆ ನೀವೆಷ್ಟೇ
ಅಪ್ಪಳಿಸಿದರೂ;
ಹುಡುಗರು -
ಮತ್ತವರ ಪ್ರೀತಿಯೂ,
ಬಂಡೆಯಂತೆಯೇ,
'ಅಚಲ'
೩)
ಮೊನ್ನೆ ಸಂಜೆ,
ನವಿಲು ಗರಿಬಿಚ್ಚಿ
ಕುಣಿವ ಸಮಯಕೆ
ನೀನು ನೆನಪಾಗಿದ್ದೆ.
೪)
ಬಿದ್ದ ಮಳೆಹನಿ ಕೂಡ
ಸದ್ದಿಲ್ಲದೆಯೇ -
ಕೊಚ್ಚಿ ಹೋಯಿತು
ನನ್ನ ಕಣ್ಣೀರಂತೆ
ತುಂಬಾ ದಿನವಾಯ್ತು
ಅಂತ ಮಾಮೂಲು
ಜಾಗಕ್ಕೆ ಬಂದೆ,
ನೀನು ಬರಲಿಲ್ಲ!
೬)
ನಮ್ಮ ಕಾಂಪೌಂಡಿನ
ಗುಲಾಬಿ ಮನದುಂಬಿ
- ನಗುತ್ತಿದೆ,
ನಿನ್ನ ಕಂಡಿರಬೇಕು!
- ಪ್ರಸಾದ್
ಕಳ್ದೋದೆ ಮಗಾ.. ನಿನ್ನಲ್ಲಿ ಭಾವಗಳನ್ನ ಯಾರಿಗೂ ಹೇಳೋಕೆ ಬರದಿರೋ ಆದ್ರೆ ಎಲ್ರೂ ಕೇಳೊಕೆ ಇಷ್ಟಪಡೋ ಹಾಗೆ ಪೋಣಿಸೋ ತಾಕತ್ತಿದೆ.. 1,2,5,6 haiku wonderfull..
ಪ್ರತ್ಯುತ್ತರಅಳಿಸಿ