ಶನಿವಾರ, ಜುಲೈ 9, 2011

ಹನಿಗಳು

1) ನಿದ್ದೆ.

ಕತ್ತಲ ಚಾದರ
ಹಾಸಿತು ಭಾನು.
ಜಗ ಜಂಜಡವೆಲ್ಲ
ಮರೆತು ಮೆಲ್ಲ
ಮಲುಗಿತು ಭುವಿ.







2) ಪಾಠ.

ಪಾಠ ಮಾಡುತ್ತಿದ್ದ ಮೇಸ್ಟ್ರು
ಜೋರು ದನಿಯಲ್ಲಿ ಹೇಳಿದರು:
"ಕೆಟ್ಟದ್ದನ್ನು ಕೇಳಬಾರದು"
ಅಷ್ಟೇ; ಕ್ಲಾಸು ಖಾಲಿಯಾಯ್ತು!









3) ರಿಯಲ್ ಎಸ್ಟೇಟ್.

ಹೆಸರಿಗೆ ಮಾತ್ರ ರಿಯಲ್
ಈ ಉಧ್ಯಮ ಅದುವೇ;
'ರಿಯಲ್ ಎಸ್ಟೇಟು'
ಮರೆಮಾಚುವಲ್ಲಿ ಯಶಸ್ವಿಯಾಗುತ್ತದೆ
ರಿಯಲ್ ಎಸ್ಟ್-ರೇಟು!







4) ಸಮಾನಾರ್ಥಕ.

ಹೆಂಡತಿ ಪದಕ್ಕೆ
ತಕ್ಕ ಪರ್ಯಾಯ:
'ಮನದನ್ನೇ'
ಫ್ರಿಡ್ಜ್ ತಂದಾಗಿಂದ
ಉಣಬಡಿಸುತ್ತಿದ್ದಾಳೆ
'ಮೊನ್ನೇದನ್ನೇ'!






5) ಕುಂಡಲಿ.

ಜಾತಕ ನೋಡಿದ ಜ್ಯೋತಿಷಿ
ಹುಬ್ಬೇರಿಸಿ ಹೇಳಿದ:
"ನಿನ್ನ ಕೈಲಿ ದುಡ್ಡು -
ತುಂಬಾ ಓಡಾಡತ್ತೆ!"
ಕೂಡ್ಲೇ ಕೆಲ್ಸಾ ಕೂಡ ಸಿಗ್ತು.
ಅವ್ನೀಗ ಸ್ಟೇಟ್ ಬ್ಯಾಂಕ್ ನಲ್ಲಿ
'ಕ್ಯಾಷಿಯರ್ರು'!..





6) ಅಡುಗೆ-ಕೊಡುಗೆ

ಮೈಕ್ರೋ-ವೇವ್ ಓವನ್ನು
ತಂದುಕೊಟ್ಟ ನಂತರ
ಮನೇಲಿ ಎಕ್ಸ್-ಪೆರಿಮೆಂಟು
ಜಾಸ್ತಿಯಾಯ್ತು.
ಬಡಪಾಯಿ ಗಂಡನಿಗೆ
ಹೊಟೆಲ್ ಊಟ
ಖಾತ್ರಿಯಾಯ್ತು!.





7) ಮಾಡೆಲ್

ರ್‍ಯಾಂಪ್ ಮೇಲೆ
ತಳುಕುತ್ತಾ
ಬಳುಕುತ್ತಾ
ನಡೆಯುತ್ತಾಳೆ
ಮಾಡೆಲ್ಲು.
ಮೈತುಂಬಾ ಬಟ್ಟೆ
ಹಾಕಿದ್ರೆ ಮಾತ್ರ
ಅವ್ಳು ಡಲ್ಲು!.