ಯಾರು ಹಿತವರು ನಮಗೆ?
ಯೂ.ಪೀ.ಎ(U'Pee'A) ತನ್ನ ಭಯಂಕರ ಮೀಟಿಂಗು ಮುಗಿಸಿ ಕೊನೆಗೂ ರಾಷ್ಟ್ರಪತಿ ಸ್ಥಾನಕ್ಕೆ ಅಭ್ಯರ್ಥಿಯನ್ನ ಆಯ್ಕೆ ಮಾಡಿ ಮುಗಿಸಿದೆ. ನಾನೀಗ ಹೋಗಿ ಅನೌನ್ಸ ಮಾಡ್ತೀನಿ ಸುಮ್ನೆ ನನ್ಹಿಂದೆ ನಿಂತ್ಗಂಡಿರು ಮೋಹನಾ ಅಂದಿರ್ಲಿಕ್ಕೆ ಸಾಕು ಇಟಲಿಯಮ್ಮ! ನಿರೀಕ್ಷೆಯಂತೆ ಹೀಗೆ ಆಯ್ಕೆಯಾದ ಅಭ್ಯರ್ಥಿ ಬೇರಾರೂ ಅಲ್ಲ; ಆತ ಪ್ರಣಬ್ ಮುಖರ್ಜಿ, ವಿತ್ತ ಸಚಿವ. ದೇಶದ ಆರ್ಥಿಕತೆ ನೆಲೆಕಚ್ಚಿ ಕುಳಿತಿರುವಾಗ ಸದರಿ ಹುದ್ದೆ ಅಲಂಕರಿಸಿರುವ ಇವರನ್ನ ದೇಶದ ಮಹೋನ್ನತ ಪದವಿಗೆ ಅಣಿಗೊಳಿಸುತ್ತಿರುವುದು ಹಾಸ್ಯಾಸ್ಪದ.ಅಂದಹಾಗೆ ಹಿಂದೊಮ್ಮೆ ಶ್ರೀಯುತರು ಚಾನ್ಸ್ ಕೊಡಿ ಅಂದಾಗ ಇಟಲಿಯಮ್ಮ ಟೈಮ್ ಬರ್ಲಿ ತಡ್ಯಪ್ಪ ಅಂದಿದ್ರು, ಕೊಟ್ಟಮಾತಿಗೆ ತಪ್ಪದೆ ಈಗ ಈ ನಿರ್ಧಾರಕ್ಕೆ ಬಂದಿರಬೇಕು! ಕಾಂಗ್ರೆಸ್ನಲ್ಲಿ ಡಿಸಿಷನ್ ಮೇಕಿಂಗ್ ಪವರ್ರು ಇಟಲಿಯಮ್ಮನ್ನ ಬಿಟ್ರೆ ಬೇರಾರಿಗೂ ಇಲ್ಲದ ಕಾರಣ ನೋ ಒಬ್ಜೆಕ್ಷನ್ :P
ಅಂದಹಾಗೆ ನಮ್ಮ ದೇಶದ ಪ್ರಧಾನ ಮಂತ್ರಿ, ಅಂದರೆ ಮನಮೋಹನ 'ಸಿಂಗಂ' ಅವರ ಹೆಸರೂ ಕೇಳಿಬಂದಿತ್ತು, ಅದೊಂತರ ಈಗ್ಲೇ ರಬ್ಬರ್ ಸ್ಟಾಂಪ್ ಆಗಿರೋದ್ರಿಂದ - ಇದ್ದಲ್ಲೇ ಇರ್ಲಿ ಅಂತ ಆಮೇಲೆ ಕೈಬಿಡಲಾಯ್ತು! ನಮ್ಮ ರಾಷ್ಟ್ರದ ಸದ್ಯದ ಸರ್ವೋಚ್ಚ ಹುದ್ದೆ ಮೇಲೆ ಕುಳಿತಿರುವ ಪ್ರತಿಭಾ ದೇವಿ ಸಿಂಗ ಪಾಟೀಲ ಅವ್ರು ಭೂಪಟದ ಯಾವ್ದೋ ಮೂಲೆಯಲ್ಲಿ ಪ್ರವಾಸ ನಿರತರಾಗಿದ್ದು, ಎಲ್ಲಾ ನಿಧಾನವಾಗಿ ಆಗ್ಲಿ ಬಿಡಿ ಅಲ್ಲೀವರ್ಗೂ 'ಮೇ ಔರ್ ಏಕ್ ರೌಂಡ್ ಮಾರ್ ಕೆ ಆವೂಂಗಿ' (ಇನ್ನೊಂದ್ ಬಾರಿ ಸುತ್ಕೊಂಡು ಬರ್ತೀನಿ) ಅಂತ ಮೆಸೇಜ್ ಕಳಿಸಿದ್ದಾರಂತೆ!
ಲೋಕಸಭೆಯ ಸ್ಪೀಕರ್ ಆಗಿದ್ದ ಸೋಮನಾಥ ಚಟರ್ಜಿ ಹೆಸರೂ ಹೀಗೆ ಬಂದು ಹಾಗೇ ಹೋಯ್ತು. ಆಮೇಲೆ ಯಾರೋ ಜೆ.ಡಿ.ಎಸ್'ನ ಕೃಷ್ಣ ಅನ್ನೋರು ದೂಳುಪುತ್ರ ದೇವೇಗೌಡ ಅವ್ರು ಸೂಕ್ತ ವ್ಯಕ್ತಿ ಕಣ್ರೀ ಅಂತ ದೊಡ್ಡ ಜೋಕೊಂದನ್ನು ತೇಲಿಬಿಟ್ರು. ರಾಮಕೃಷ್ಣ ಹೆಗಡೆ ಅವ್ರಿಗೆ ಸಿಗಬೇಕಿದ್ದ ಪ್ರಧಾನಿ ಹುದ್ದೇನಾ ಇವ್ರು ವಕ್ಕರಿಸಿದ್ದು ಯಾಕೋ ನೆನಪಾಗಿ ಬೇಸರವಾಯ್ತು :( ಇದ್ರ ಜತೆ ಯಾವ್ದೋ ಶಾಲೆಯ ಮೇಷ್ಟ್ರು ಒಬ್ರು ಗೌಡ್ರು ಹೋದರಂತೆ ಅಂತ ಮೌನಾಚರಣೆ ಮಾಡಿಸ್ಬಿಟ್ಟಿದ್ರಂತೆ - ಎಷ್ಟೋ ಜನ ಉಸ್ಸಪ್ಪ -ಕೊನೆಗೂ-ಅಂದೋರು, ಸುಳ್ಳು ಸುದ್ದಿ ಅಂತ ಗೊತ್ತಾಗಿ ಬೇಸರ ಪಟ್ರು ಅಂತ ವರದಿಯಾಗಿದೆ :P
ಮಮತಾಮಯಿಯ ತ್ರಣಮೂಲ ಮಾತ್ರ ಕಾದು ನೋಡ್ತೀನಿ ಅಂದದ್ದು, ಏನಾರ ಸಿಗತ್ತಾ(ರಾಜ್ಯಕ್ಕೆ!) ಅಂತ ನೋಡ್ಕ್ಯಂಡು ನಿರ್ಧಾರ ತಗೊಳ್ಳೋ ಸಾದ್ಯತೆಗಳು ದಟ್ಟವಾಗಿವೆ.ಇನ್ನು ಎಸ್ಪಿ ಎಂಬ ದೊಡ್ಡ(ದಡ್ದ) ಪಕ್ಷ ಪ್ರಸಾದ ಸ್ವೀಕರಿಸಿ ಪ್ರಣಬ್'ಗೆ ಜೈ ಅಂದುಬಿಟ್ಟಿದೆ. ಎಂಬಲ್ಲಿಗೆ ಇಟಲಿಯಮ್ಮನ ಮನೆಯ ಮಾಲಿಗಳೂ ಕೂಡ ಹೊಸಬಟ್ಟೆ ಹೊಲಿಸಿಕೊಂಡು ನಾವ್ ರೆಡಿ ಅನ್ನೋಕೆ ಹೋಗಿದ್ರಂತೆ. ಇತ್ತ ಮನಮೊಹನರು ಕೂಡ ತಮ್ಮ ಹೆಸರು ತೇಲಿಬಂದದ್ದು ಕೇಳಿ 'ಬಯಸದೆ ಬಳಿ ಬಂದೇ' ಹಾಡು ಹಾಡಿಕೊಂಡಿದ್ರಂತೆ. ಇದನ್ನ ಕೇಳಿ ಇಟಲಿಯಮ್ಮ ಮೋನು ಸುಮ್ನಿರಪ್ಪಾ, 2014ರ ವರೆಗೂ ಹಿಂಗೇ ಎಂಗೇಜ್ ಆಗಿರು ಅಂದಳಂತೆ! :P
ಮೈತುಂಬ ಹಗರಣ ಹೊತ್ತು ಹೆಣಗಾಡುತ್ತಿರುವ ಡಿ.ಎಂ.ಕೆ_ಯ ಕೊಂಗ ಕರುಣಾನಿಧಿ, ಹಮೀದ್ ಅನ್ಸಾರಿ ಓಕೆ ಕಣ್ರೀ ಅಂತ ಸುಮ್ನೆ ತಮಾಷೆಗೆ ಹೇಳಿತ್ತಾದ್ರು, ತಮ್ಮ ಮೇಲಿರೋ ಎಲ್ಲ ಕೇಸ್'ಗಳನ್ನ ವಸಿ ನೋಡ್ಕ್ಯಂಡ್ರೆ ನಿಮ್ಮ ಹಸಾನೇ ಮುಂದೆ ಹೋಗ್ಲಿ, ನಮ್ ಹೋರಿನೇ ಹಿಂದೆ ಬರುತ್ತೆ ಅಂತ ಹೇಳ್ಬಿಡ್ತಂತಪ್ಪ! ದೇಶ ಯಕ್ಕುಟ್ಟೋದ್ರು ಪರ್ವಾಗಿಲ್ಲ - ತಮ್ ಕೆಲ್ಸಾ ಆದ್ರೆ ಸಾಕು ಅಂತ ಎಲ್ಲ ರಾಜಕೀಯ ಪಕ್ಷಗಳೂ ಅನ್ಕೊಂಡಿರೋದಕ್ಕೆ 'ಪ್ರಣಬ್ ಯೂ ಆರ್ ಲಕ್ಕಿ'!
ಮಧ್ಯೆ ಕೇಳಿಬಂದ ಹೆಸರುಗಳು ದೇಶದ ಜನತೆಯನ್ನ ನಿಟ್ಟುಸಿರು ಬಿಡುವಂತೆ/ಉಸಿರಾಡುವಂತೆ ಮಾಡಿದ್ದವು. ಭಾರತದ ಟೆಲಿಕಾಂ ಪಿತಾಮಹ ಸ್ಯಾಮ್ ಪಿತ್ರೋಡಾ ಒಂದು ಒಳ್ಳೆ ಆಯ್ಕೆ ಆಗಬಹುದಿತ್ತು, ಹಾಗಾಗಲಿಲ್ಲ. ಆಮೇಲೆ ಇನ್ಫಿಯ ನಾರಾಯಣಮೂರ್ತಿ ಅವರ ಹೆಸರು ಚಾಲ್ತಿಗೆ ಬಂತು, ಅದೂ ಒಂದೇಟಿಗೆ ಓಕೆ ಅನ್ನೋಹಾಗಿತ್ತು. ಏನೇನೋ ಆಗಿ, ಕೊನೆಗೆ ಅವರನ್ನೇ ಮಾತಾಡಿಸಿದ್ರೆ ಅವೆಲ್ಲ ಇಲ್ಲ ಕಣ್ರೀ, ಈ ರಾಜಕಾರಣಿಗಳೇ ಸೂಕ್ತ ವ್ಯಕ್ತಿಯನ್ನ ಆಯ್ಕೆ ಮಾಡ್ಲಿ ಬಿಡಿ(ನಿಜಾನ !?) ನೀವೇಕೆ ಸುಮ್ನೆ ಇರುವೆ ಬಿಟ್ಗಂತೀರಾ ಅಂದ್ಬಿಟ್ರು!
ಸಭ್ಯ-ಸಜ್ಜನ ಮಾಜಿ ರಾಷ್ಟ್ರಪತಿ ಕಲಾಂ ಅವ್ರ ಹೆಸ್ರು - ಹಿಂದೆ ಅವ್ರನ್ನ ಆಯ್ಕೆ ಮಾಡಿದ್ದ ಏನ್.ಡಿ.ಎ ಪಾಳೆಯದಿಂದಲೇ ಕೇಳಿ ಬಂತು.ಅಬ್ಬ ಬಿ .ಜೆ.ಪಿ ಏನೋ ಒಳ್ಳೆ ಕೆಲ್ಸಾ ಮಾಡ್ತಿದೆ ಅಂತ ಜನ ಆಸೆ ಇಟ್ಗೊಂಡಿದ್ರು. ಆದ್ರೆ ವೋಟಿಂಗ್ ಲೆಕ್ಕಾಚಾರದ ಪ್ರಕಾರ ಕಲಾಂ ಗೆಲ್ಲೋದು ಕಷ್ಟ ಅಂತ ಅನ್ನಿಸಿ, ಅದೀಗ ದಿಕ್ಕೆಟ್ಟು ಕುಳಿತಿದೆ. ಇತರ ಪಕ್ಷಗಳು ತಮ್ಮ ಬೇಳೆ ಬೇಯಿಸಿಕೊಳ್ಳೋ ಆಲೋಚ್ನೆ ಬಿಟ್ಟು ಸುಮ್ನೆ ಕಲಾಂ'ಗೆ ಬೆಂಬಲ ಸೂಚಿಸಿದರೆ ರಾಷ್ಟ್ರಕ್ಕೆ - ಜನಕ್ಕೆ ತುಂಬಾ ಒಳ್ಳೆಯದು. ಅತ್ತ ಬೇಸತ್ತು ಕಲಾಂ, ವಿತ್ತ ಸಚಿವರ ವಿರುದ್ದ ನಾನು ನಿಲ್ಲೋದಿಲ್ಲ ಬಿಡಿ ಅಂತಿದಾರೆ. ಭವ್ಯ ಭಾರತ ದೇಶದ ಜನರ ರಕ್ತ ಕುದಿಯುವ ಬದಲು, ತಣ್ಣಗಾಗಿ ಬಿಟ್ಟಿರುವುದು ಮಾತ್ರ ವಿಪರ್ಯಾಸ :(
ಓದಿದ ನೀವು - ಅಭಿಪ್ರಾಯ ಹಂಚಿಕೊಳ್ಳಿ, ಮಿತ್ರರಿಗೆ ಕೊಟ್ಟು ಓದ್ಸಿ, like/share ಮಾಡಿ. ಒಟ್ಟಾರೆ ಏನು ಒಳ್ಳೇದು ಅನ್ಸುತ್ತೋ ಅದನ್ನ ಮಾಡಿ!
- ಪ್ರಸಾದ್