ಭಾನುವಾರ, ಏಪ್ರಿಲ್ 17, 2011

ಒಂದು ನಿರ್ಧಾರ.

ಹೌದು ನಾನೊಂದು ನಿರ್ಧಾರಕ್ಕೆ ಬಂದಿದೀನಿ; ಇನ್ಮುಂದೆ forward message ಕಳಿಸಬಾರದು  ಅಂತ.
I mean i'll send, but not in a bulk.
ನಿಮ್ಮ ಹತ್ರ ಈ ವಿಚಾರಾನ ಹೇಳ್ಕೊಳ್ಳೋಣ ಅನ್ನಿಸ್ತು ಅದಕ್ಕೆ ಈ ಬರಹ. ರಾತ್ರಿ ಹನ್ನೆರಡು ಗಂಟೆ ಆಗಿದೆ
'madiraasapattinam'(ಮದರಾಸಪಟ್ಟಣಂ) ಫಿಲಂ ನೋಡಿ ಮಲಗಿದ್ದೆ ನಿದ್ದೆ ಬರ್ತಿಲ್ಲಿಲ್ಲ ಅದು ಇನ್ನೊಂದು ಕಾರಣ.
ಇಷ್ಟು ಹೇಳಿದ್ರು ನೀವು ಮುಂದೆ ಓದ್ತಿದೀರ ಅಂದ್ರೆ ಅದು ವಿನಾಕಾರಣ!. ನಿದ್ದೆ ಬಂದಿಲ್ಲಾಂದ್ರೆ carryon...

ಅಂದಹಾಗೆ ಸದ್ಯ ಅಷ್ಟೇ ಸಾಫ್ಟ್ವೇರ್ ಇಂಜಿನಿಯರ್ ಆಗಿದೀನಿ, ಮೊದಲು ಏನ್ಮಾಡ್ತ ಇದ್ದೆ ಅಂತ ಇನ್ನೊಮ್ಮೆ ಬರೀತೀನಿ..
ಅದೊಂದು ಕಥೆ- ಮತ್ತೆ ನಿಮಗೆ ಗೊತ್ತಿಲ್ದೆ ಇರೋ ಹೊಸ ಲೋಕ ಅಂತ ಅಷ್ಟೇ ಸದ್ಯ ಹೇಳಬಲ್ಲೆ.
ಜೀವನದಲ್ಲಿ  ನಾವು ತಗೊಳ್ಲ್ಲೋ ನಿರ್ಧಾರವನ್ನ ದೊಡ್ಡದು, ಸಣ್ಣದು ಅಂತಾ ಎರಡು ರೀತಿ ವಿಭಾಗಿಸೋಣ.
ದೊಡ್ಡ ನಿರ್ಧಾರಗಳಿಗೆ ದೊಡ್ಡ ದೊಡ್ಡ ಕಾರಣಗಳಿರುತ್ತವೆ ಅದಕ್ಕಿಂತ ಹೆಚ್ಚಾಗಿ ಅನಿವಾರ್ಯತೆ ಇರತ್ತೆ leave it. ಯಾಕಂದ್ರೆ ನಾವು ಅಷ್ಟೊಂದು ಯೋಚನೆ ಮಾಡೋಷ್ಟು ದೊಡ್ದೋರಲ್ಲ. ಈ ಚಿಕ್ಕಪುಟ್ಟ ನಿರ್ಧಾರಗಳಿರುತ್ತವಲ್ಲ ಅವುಗಳು
ನಮ್ಮಮೇಲೆ ನಮಗೊಂದು ಹಿಡಿತವನ್ನ ನೀಡುತ್ತವೆ. ಈ ನಿರ್ಧಾರಗಳನ್ನ ತಗೊಂಡಮೇಲೆ ಜಾರಿಗೆ ತರೋದು ಕೂಡ ಸುಲಭ.
ಏನೋ ಮಾಡ್ತಿರ್ತೀರಿ ಇದ್ದಕ್ಕಿದ್ದಂತೆ  ಒಂದು ಯೋಚನೆ ಬರತ್ತೆ-ಅದು ಹಾಗೆ ಮಾಯವಾಗೊದ್ರೊಳಗೆ ಉಪಯೋಗಿಸಿಕೊಳ್ಳಿ
ಅಥವಾ ತಕ್ಷಣಕ್ಕೆ ಜಾರಿಗೆ ತಂದುಬಿಡಿ, ನೆಪ ಬೇಡ -ನಾಳೆಯಿಂದ ಅಂತ ಮಾತ್ರ ಅಂದುಕೊಳ್ಳೋದು ಬೇಡ.

 

ಇಂದಿಗೂ ನನ್ನ ಕೆಲವೊಂದು ಗೆಳೆಯರು ಬಯ್ಕೊತಿರ್ತಾರೆ. ಎಲ್ಲಿದೀಯ ಗುರೂ... ಒಂದ್ call ಇಲ್ಲ, ಮೆಸೇಜ್ ಇಲ್ಲ..
ಮರೆತು ಬಿಟ್ಯಾ ಹೆಂಗೆ..? ಸುಮ್ನೆ ಅವರನ್ನೊಮ್ಮೆ ನೋಡಿ ಇಲ್ಲ್ಲಅಂತೀನಿ, next ಒಂದು ಕಾರಣ ಕೊಡ್ತೀನಿ dats all.
ಆಮೇಲೆ ವಿಷಯ ಚೇಂಜ್ ಮಾಡಿ chapter 'close' ಮಾಡ್ತೀನಿ; try it yourself!. ಯಾಕಂದ್ರೆ ಜೀವನ ಅಂದ್ರೆ forward message ಒಂದೇ ಅಲ್ವಲ್ಲ..its ture story...not a toy story !.

ಚಾಟಿಂಗ್ ಮಾಡಿ ಯಾಕಂದ್ರೆ ಅದರಿಂದ ಕ್ರಿಯೇಟಿವ್ ಆಗ್ತೀರ!, ಅದ್ರಲ್ಲಿರೋ ಪ್ರತೀ ಅಕ್ಷರಾನು ನಿಮ್ಮದೇ ತಾನೇ..
but take control.. ಹುಡ್ಗೀರ್ಗೆ ತುಂಬಾ ಚೆನ್ನಾಗಿ ಮಾತಾಡೋರು/text ಮಾಡೋರು ಬೇಗ ಇಷ್ಟ ಆಗ್ತಾರೆ ಲವ್ವು-ಗಿವ್ವು ಅಂತ ಬೆನ್ನತ್ತಿಬಿಟ್ಟಾರು ಹುಷಾರು!. ನಿರ್ಧಾರ ತಗೊಳ್ಳಿ ಅಂತ ಹೇಳ್ತಿದೀನಿ ಅಷ್ಟೇ ಯಾವ್ದು ಅಂತ ನೀವೇ ನಿರ್ಧರಿಸಿ. ಸುಳ್ಳು ಹೇಳಲ್ಲ ಅಂತ ನಿರ್ಧಾರ ತಗೊಳ್ಳಿ- ಹೇಳ್ಬೇಡಿ ಕೂಡ. ಯಾರಿಗೋ ಬೇಜಾರಾಗತ್ತೆ ಅಂತ ನೀವು ಸುಳ್ಳರಾಗಬೇಕೆಂದೇನು ಇಲ್ವಲ್ಲ. ಇನ್ನೊಂದು ನಿರ್ಧಾರಾನ ನಾನು 9th ಕ್ಲಾಸ್ ನಲ್ಲಿದ್ದಾಗ್ಲೆ ತಗೊಂಡಿದ್ದೆ; ಊಟಕ್ಕೆ ಕುಳಿತೋನು extra ಉಪ್ಪು ತಿನ್ನಲ್ಲಾಂತ,
ನಮ್ಮ ತಾತ ಕೂಡ ತಿಂತಿರಲಿಲ್ಲ ಅವರ ನಂತರ ನಾನು ಶುರುಮಾಡಿದೆ. ತಾತ ಬೆಳಿಗ್ಗೆ ಹಾಸಿಗೆ ಮೇಲೆ ಕೂತಿದ್ದೋರು, ನನ್ನ ಅಮ್ಮನ ಹತ್ರ 'ಬಾಗಿಲು ತೆಗೆದಿಟ್ಟಿರು ಹೊರಗಡೆ ಹೋಗ್ಬೇಕು' ಅಂದ್ರು.
ಅಮ್ಮ ರಂಗೋಲಿ ಹಾಕಿ ವಾಪಸ್ ಬರೋ ಹೊತ್ತಿಗೆ ತುಂಬಾ ದೂರ ಹೋಗಿದ್ರು, ನೆಮ್ಮದಿಯ ಸಾವು ಅಂದ್ರೆ ಅದಲ್ವ 90ನೇ ವಯಸ್ಸಿನಲ್ಲಿ!. ಉಪ್ಪು ಬಿಟ್ಟದ್ದು ತುಂಬಾ ಒಳ್ಳೆ ನಿರ್ಧಾರ ಅಂತ ನಮ್ doctor ಕೂಡ ಹೇಳಿದ್ರು.
ನಂಗೆ ಕೋಪ ಜಾಸ್ತಿ  ಅಂದ್ರೆ ಕೆಲವರು ನಂಬಲ್ಲ, ಆದ್ರೆ ನಿಜ ಉಪ್ಪು ತಿನ್ನ್ನ್ನೋದು ಬಿಟ್ಟ ಮೇಲೆ ಕೊಂಚ ಕಡಿಮೆ ಆಗಿದೆ;
i have experienced it'.

ಮತ್ತೆ ನಮ್ಮ ಮೊದಲಿನ ವಿಚಾರಕ್ಕೆ ಬಂದ್ರೆ ನೀವು ಕಳಿಸಿದ ಮೆಸೇಜ್'ನ ಪರಿಸ್ತಿತಿ ಇನ್ನೊಬ್ರ inbox ನಲ್ಲಿ
ಯಾವ ಥರ ಆಗಿರುತ್ತೆ ಅಂತ ಕಲ್ಪನೆ ಮಾಡ್ಕೊಳ್ಳಿ;
1>ಕೆಲವರ  inbox ತುಂಬಿ ತುಳುಕಾಡ್ತಾ ಇರತ್ತೆ, ನಿಮ್ಮ ಮೆಸೇಜ್'ಗೆ ದಾರಿಮಾಡಿ ಕೊಡೋಷ್ಟು ಪುರುಸೊತ್ತು ಅವ್ರಿಗೆ ಇರಲ್ಲ
2>ಓಹ್ ಹಳೆ ಮೆಸೇಜ್ ಅಂತ ಡಿಲೀಟ್ ಮಾಡ್ತಾರೆ ಇನ್ನು ಕೆಲವರು.
3> ಅಯ್ಯಪ್ಪಾ PJ ಅಂತ ಅನ್ಕೊತಾರೆ ಇನ್ನು ಮಿಕ್ಕಿರೋರು, ಇವೆಲ್ಲ ಬೇಕಾ.....?

ಅದಕ್ಕೆ ಇಂಥ ನಿರ್ಧಾರ ತಗೊಳ್ಳಿ ಅಂತಿಲ್ಲ; ಯಾಕಂದ್ರೆ ಡಿಸೈನ್-ಡಿಸೈನ್ ಆಗಿ ನಿರ್ಧಾರ ತಗೊಳ್ಳೋ ಸ್ವಾತಂತ್ರ್ಯ ನಿಮಗಿದೆ.
ಅದನ್ನ ಬೇರೆ ಯಾರೋ ಹೇಳಬೇಕಾಗಿಲ್ಲ ಅಲ್ವ. ಇನ್ನೊಂದು ವಿಚಾರ ಯಾರಾದ್ರೂ ಪರಿಚಯ ಇರೋರು ಅಥವಾ  ಫ್ರೆಂಡ್ಸ್ ಸಿಕ್ರೆ  ಅವರ ಹತ್ರ ಮಾತಾಡಿ, ತುಂಬಾ ನಗಿ, 'ಜೇಬಲ್ಲಿ ದುಡ್ಡಿದ್ರೆ' ಏನಾದ್ರೂ ಕೊಡ್ಸಿ, ಇಲ್ಲಾಂದ್ರೆ ಅವ್ರ ಹತ್ರಾನೆ ಇಸ್ಕೊಂಡು-ತಿನ್ನಿ ಮಜಾ ಮಾಡಿ!. ಅದನ್ನ ಬಿಟ್ಟು i'll call  you, text you ಅಂತೆಲ್ಲ ಬ್ಯುಸಿ ಇರೋತರ ಕಾಗೆ ಹಾರಿಸೋದು ಚೆನ್ನಾಗಿರಲ್ಲ ಅಲ್ವ.. ತುಂಬಾ ಯೋಚನೆ ಮಾಡದೇ ಆದಷ್ಟು ಬೇಗ ಒಂದು ಒಳ್ಳೇ ನಿರ್ಧಾರಕ್ಕೆ ಬನ್ನಿ.
ಇಷ್ಟು ಓದಿದಮೇಲೆ ಹಲ್ಕಾನನ್ಮಗಾ ಗುರೂ ಇಷ್ಟೊತ್ತು ಸುಮ್ನೆ ಟೈಮ್ ವೇಸ್ಟ್ ಮಾಡ್ಬಿಟ್ಟ ಅಂತ ನಿರ್ಧಾರಕ್ಕೆ ಬಂದ್ರೆ..
ನಾನಂತೂ ಜವಾಬ್ದಾರನಲ್ಲ!
-
ಪ್ರಸಾದ್

3 ಕಾಮೆಂಟ್‌ಗಳು: