ಭಾನುವಾರ, ಸೆಪ್ಟೆಂಬರ್ 2, 2012

ನೀನು ಒಪ್ಪಿಕೊಳ್ತೀಯಾ ಅಂದ್ರೆ....., ಹೂಂ ಕಣೆ ಇದು 'ಪ್ರೇಮ ಪತ್ರ'!


ತೀರ ಕನಸಿಗಷ್ಟೇ ಬರ್ತಾ ಇದ್ದೋಳು, ಇತ್ತೇಚೆಗೆ ಒಂದೇ ಸಮನೆ ನೆನಪಾಗಿ ಕಾಡ್ತಾ ಇದೀಯಾ. ಮರೆಯಲು ಸಾಧ್ಯವಿಲ್ಲ ಅಂತ ಇಬ್ಬರಿಗೂ ಗೊತ್ತು!  ನಿನ್ನ ಇಂಚಿಂಚೂ ಅರ್ಥಮಾಡಿಕೊಳ್ಳುವ ಪ್ರಯತ್ನದಲ್ಲಿ ಸಫಲನಾದೇನೆಂಬ ನಂಬಿಕೆಯಿದೆ. ತಲೆಯಲ್ಲಿ ಸಾವಿರ ಕನಸುಗಳಿವೆ ಹುಡುಗಿ, ಹೂಂ ಕಣೋ ಸಾದಿಸ್ತೀಯ ಅನ್ನೋಕೊಂದು ಜೀವ ಜೊತೆಗೆ ಬೇಕಿದೆ. ಸ್ಪೂರ್ತಿಯ ಸೆಲೆಯಾಗಿ, ಕನಸಿಗೆ ನೆಲೆಯಾಗಿ. ಸುಳ್ಳು ಹೇಳಿ ನಿನ್ನ ಪಡೆವ ಜರೂರತ್ತೇನೂ ಇಲ್ಲ, ಆದರೂ ಅಗತ್ಯ ಬಿದ್ರೆ ಆಗಸದಷ್ಟು ಸುಳ್ಳು ಹೇಳಿಯಾದರೂ ನಿನ್ನ ಪ್ರೀತಿಸ್ಲೇಬೇಕೆಂಬ ಹಟಕ್ಕೆ ಬಿದ್ದಿದೆ ಮನಸು. Convince ಮಾಡೋಕೆ ಆಗ್ದಿದ್ರೆ confuse ಮಾಡಬೇಕಂತೆ! - ಯಾರೋ ತಿಳಿದೋರು ಹೇಳಿರೋ ಮಾತು. ಸಮಯ ಸುಕಾಸುಮ್ಮನೆ ಕಳೆಯುತ್ತಿದೆ, ನಂಗೊತ್ತು Time ಬೇಕು ನಂಗೆ ಅಂತೀಯ ನೀನು; ಅದಕ್ಕೂ ಸಿದ್ದನಿದ್ದೇನೆ - ಎಷ್ಟಾದರೂ ಟೈಮ್ ತಗೋ ಆದ್ರೆ 'ನೀನು ನನ್ನೊಳು ಅಂತ ಬರವಸೆ ಕೊಡು!' ನಿನ್ನ ಕಣ್ಣಲ್ಲೇ ನನ್ನಿಡೀ ಜೀವನವನ್ನ ನೋಡಿಕೊಂಡು ಬಿಡ್ತೀನಿ, ಇದೊಂದು ಜನ್ಮ ಜತೆಗಿದ್ದುಬಿಡು.



ಬೊಗಸೆತುಂಬ ಪ್ರೀತಿ, ಕೆನ್ನೆಮೇಲಿನ ನಗು, ಕಂಗಳಲ್ಲಿ ಖುಷಿ ಮಾಯದಂತೆ ಕಾಯ್ದುಬಿಡುತ್ತೇನೆ, ನನ್ನಾಣೆ. ಸಿಕ್ತೀಯಾ ಅಂತಾದ್ರೆ - ಕಾಯ್ತೀನಿ ಕಣೆ - ಕಾಯೋದ್ರಲ್ಲೂ ಖುಷಿಯಿದೆ ಅಂದೋನು ನಾನು.

ನಿನ್ನ ಹಂಸ ಪಾದಕ್ಕೆ ಗೆಜ್ಜೆಕಟ್ಟಿಯಾಗಿದೆ, ಜಲಪಾತದ ಜಡೆಗೆ ಮಲ್ಲಿಗೆ ಮುಡಿಸಬೇಕೆಂಬ ಬಯಕೆ ಹೃದಯದಿಂದ ಇಣುಕುತ್ತಿದೆ!
ನೀನೆಷ್ಟು ಹತ್ತಿರವಿದ್ದೀಯೋ ಅಷ್ಟು ಖುಷಿಯಾಗಿರ್ತೀನಿ, ತೀರ ಪಕ್ಕದಲ್ಲೇ ಇರಬೇಕೆಂಬ ಬಯಕೆಯೇನಿಲ್ಲ. ನೀನಾಗಿಯೇ ಬಂದು ನನ್ನೆದೆಯಮೇಲೆ ತಲೆಯಿಟ್ಟು ವಿರಮಿಸಿದರೆ, ನನಗಾಗೋ ಖುಷಿಯ ಆ ಬಗವಂತ ಬಲ್ಲ! ಜೀವವೀಣೆ ಜಲ್ಲೆಂದ ಸದ್ದು ನಮ್ಮಿಬ್ಬರಿಗಷ್ಟೇ ಕೇಳಿಸಬೇಕು, ಅವತ್ತಿನ ಸಂಬ್ರಮಕ್ಕೆ ಹೃದಯ ಹಾಡಬೇಕು; ಒಮ್ಮೆ ಕಿವಿಯಿಟ್ಟು ನೋಡು, ಕೇಳು!
ನಾನ್ಯಾಕೆ ಸದಾ ಖುಷಿಯಾಗಿರ್ತೀನಿ ಗೊತ್ತೇನೆ? ನಿನ್ನ ಕಂಡ ದಿನದಿಂದ ನಾನು Happy Man :)

ನಾನಂತೂ ಪ್ರೀತ್ಸಿದ್ದೀನಿ, ನೀನು?-ಗೊತ್ತಿಲ್ಲ, ಹೋಗ್ಲಿ ಬಿಡು; Atleast ನಮ್ಮಿಬ್ಬರ ಈ ಪ್ರೀತಿಯನ್ನದ್ರೂ ಪ್ರೀತ್ಸಿಬಿಡು!



ಸುಮ್ನೆ ನಿನ್ನೆ ನೋಡ್ತಾ ಕೂತಿರಬೇಕು, ನೀನೇ ಒಂಥರಾ ಖುಷಿ - ಅದಕ್ಕೇ ಹೇಳಿದ್ದು ಜತೆಗಿರು ಅಂತ. ನೀನೊಂದು ನಗು ನಕ್ಕರೆ - ಹೃದಯದಲ್ಲಿ ಪ್ರಣತಿಯ ಹಚ್ಚಿಟ್ಟು ಪುಟ್ಟ ಮಗುವೊಂದು ನಡೆದು ಹೋದಂತ ಅನುಭವ! ನಿನ್ನದೊಂದು ಕಣ್ಣ ನೋಟದಲ್ಲಿ ಬಿಂಬವಾಗಿರ್ತೀನಲ್ಲ ಸಾಕು ಕಣೆ - ಆ ಕ್ಷಣಕ್ಕೆ ಜೀವನ ಸಾರ್ಥಕ. ಬಹುಷಃ ನೀನು ನಡೆವುದ ನೋಡಿ ಆಮೇಲೆ ಅದಕ್ಕೆ 'ವೈಯಾರ' ಅಂತ ಹೆಸರಿಟ್ಟರೆನೋ? I love the way you walk! ನಿನ್ನೆಡೆಗಿನ wow ಎಂದಿಗೂ ಕಮ್ಮಿಯಾಗಲಾರದು. ನಂಗೊತ್ತು ಇಂಥ ಪತ್ರವನ್ನ ನಾನು ಸಾವಿರ ಬರೆಯಬಲ್ಲೆ, ನಿನ್ನೆಡೆಗಿನ ಪ್ರೀತಿ ಆಮೇಲೂ ಉಳಿದಿರುತ್ತೆ, ಅಷ್ಟೂ ನಿಂಗೆ ಬರ್ದಿದ್ದು ಕಣೆ ಅದನ್ನ ನೀನೇ ತಿಳ್ಕೋಬೇಕು, ತೀರ ಅದಕ್ಕೂ ಸಮಜಾಯಷಿ ಕೇಳಬೇಡ! ಯಾವತ್ತಿಗೂ ನೀನು ನನ್ನ ಕುತೂಹಲ, ಅದೆಷ್ಟೇ ಹುಡುಕಿದರೂ, ನಿನ್ನೆಡೆಗಿನ ಅಧ್ಯಯನಾಸಕ್ತಿ ಕಡಿಮೆಯಾಗಲಾರದು. ನನ್ನ ನಿರಂತರ ತಪನೆಯನ್ನ ಆದಷ್ಟು ಬೇಗ ಪ್ರೀತಿ ಅಂತ ಒಪ್ಪಿಕೊಂಡುಬಿಡು.. ಹೇಗಿದ್ದೀಯೋ ಹಾಗೆ ಇರು - ಪ್ರೀತ್ಸು ಅಷ್ಟೇ!
                 
              - You don't have to be perfect; to be perfect for me :)
                                                                                                            - ನಿನ್ನವ




         

6 ಕಾಮೆಂಟ್‌ಗಳು:

  1. ಪ್ರೀತಿಗೊಂದು ಪ್ರೇಮ ಪತ್ರ ಚೆನ್ನಾಗಿದೆ...
    ನೀನೊಂದು ನಗು ನಕ್ಕರೆ - ಹೃದಯದಲ್ಲಿ ಪ್ರಣತಿಯ ಹಚ್ಚಿಟ್ಟು ಪುಟ್ಟ ಮಗುವೊಂದು ನಡೆದು ಹೋದಂತ ಅನುಭವ!
    ಅದ್ಭುತ ಕಲ್ಪನೆ.. ಒಪ್ಪಿಕೊಳ್ಳದಿದ್ದರೂ ಇದು ಪ್ರೇಮ ಪತ್ರವೇ...

    ಪ್ರತ್ಯುತ್ತರಅಳಿಸಿ
  2. "ನಿನ್ನ ಕಣ್ಣಲ್ಲೇ ನನ್ನ ಇಡೀ ಜೀವನ ನೋಡ್ಕೊಂಡು ಇದ್ದುಬಿಡ್ತೀನಿ" ಸಾಲು ಅದ್ಭುತ.... ತುಂಬಾ ಚೆನ್ನಾಗಿ ಬರೆದಿದ್ದೀರ.

    ಪ್ರತ್ಯುತ್ತರಅಳಿಸಿ
  3. ಅರುಣಾ ರೆಡ್ಡಿ - ನಿಮ್ಮ ಪ್ರೋತ್ಸಾಹಕ್ಕೆ ಧನ್ಯವಾದಗಳು :)

    ಪ್ರತ್ಯುತ್ತರಅಳಿಸಿ