ಭಾನುವಾರ, ಮೇ 20, 2012

ನೀನಿಲ್ಲದೆ.... :(

ಅಳುವ ಮನಸ್ಸಾಗುತ್ತಿಲ್ಲ  
ಹುಡುಗಿ, ಕಣ್ಣೀರು ಹಾಗೆಯೇ 
ಇಂಗಿ ಹೋಗಿದೆ.

ಹೃದಯದೊಳಗೆ ದುಗುಡ    

ಹೊಯ್ದಾಡುತ್ತಿದೆ,
ಮರೆವ ಮನಸ್ಸಾಗುತ್ತಿಲ್ಲ.

ಪುನಃ ಬರುವೆಯೆಂಬುದು

ಹುಸಿಯೇ ಸರಿ, 
ಎಷ್ಟು ನಂಬಿಸಿದರೂ- ಮನಸ್ಸು ಕೇಳುತ್ತಿಲ್ಲ.


ದಿನ ಹೇಗೋ ಕಳೆಯುತ್ತೆ ಕಣೆ,  
ಸಂಜೆ ಸತಾಯಿಸುತ್ತಿದೆ, 
ನೆನಪು - ನಿತ್ಯ ಸಾಯಿಸುತ್ತಿದೆ :(

2 ಕಾಮೆಂಟ್‌ಗಳು: