ಇದು ನನ್ನ ಕನಸಿನ ಅನಾವರಣ ಅಷ್ಟೇ ಅಲ್ಲ ಸ್ನೇಹಿತರೆ, ಎಲ್ಲರ ಗಮನಕ್ಕೂ ಬಂದ ಸಂಗತಿಗಳ ಕಡೆಗಿನ ಇಣುಕುನೋಟ, ಕೊನೆಗೆ ಹುಡುಕಾಟ + ಚೂರು ಹುಡುಗಾಟ!. ಕೊಂಚ ಸೀರಿಯಸ್ಸು ವಿಚಾರಗಳನ್ನ ತಮಾಷೆಯಾಗಿ ಬರೀತೀನಿ ಪೂರ್ತಿ ವಿಷಯಾಂತರ ಆಗದಂತೆ. ನನಗೆ ಅಷ್ಟಾಗಿ ಸಾಹಿತ್ಯಜ್ಞಾನವೂ ಇಲ್ಲ.. ಮನಸಿನ ಮಾತು ಅಂತ ತೀರ ಪ್ರೈವೇಟ್ ವಿಚಾರವನ್ನೂ ಮಾತಾಡೋಲ್ಲ.. ಟೈಮ್ ಪಾಸು ಆಗತ್ತೆ ಪಕ್ಕಾ! ಸಂತಸದ ಓದು ನಿಮದಾಗಲಿ...
ಸೋಮವಾರ, ಡಿಸೆಂಬರ್ 24, 2012
ಶನಿವಾರ, ಡಿಸೆಂಬರ್ 22, 2012
ಸೋಮವಾರ, ಡಿಸೆಂಬರ್ 17, 2012
ಬದಲಾದ ಪರಿಸರ - ಹೊಂದಿಕೊಳ್ಳುವುದು ಹೇಗೆ?
ಇವತ್ತಿನ ಕನ್ನಡ ಪ್ರಭದ 'ರಂಗೋಲಿ' ಪುರವಣಿಯಲ್ಲಿ ನನ್ನ ಬರಹ: "Win ಇಂಗ್ಲಿಷ್ - ಹಳ್ಳಿ ಹುಡ್ಗಿ ಪ್ಯಾಟೇಗ್ ಬಂದ್ಲು.."
Thanks 'Priya' for sharing your thoughts. I hope it will help those who are struggling..
My article in today's 'Kannada Prabha' - Rangoli... http://www.kannadaprabha.com/ pdf/18122012/20.pdf
ಸೋಮವಾರ, ನವೆಂಬರ್ 26, 2012
ಕನ್ನಡ ಪ್ರಭ ಪತ್ರಿಕೆಯ 'ಮಕರಂದ' ಪುರವಣಿಯಲ್ಲಿ ನನ್ನವೊಂದಿಷ್ಟು ಹೈಕು (ಹನಿಗವನಗಳು) ಪ್ರಕಟಗೊಂಡಿವೆ. ಪುಟ ಸಂಖ್ಯೆ ೧೯(Page No: 19). ಹೇಗಿವೆ ತಿಳಿಸುವಿರಾ?
Link : http://www.kannadaprabha.com/pdf/24112012/19.pdf
ಭಾನುವಾರ, ಸೆಪ್ಟೆಂಬರ್ 2, 2012
ನೀನು ಒಪ್ಪಿಕೊಳ್ತೀಯಾ ಅಂದ್ರೆ....., ಹೂಂ ಕಣೆ ಇದು 'ಪ್ರೇಮ ಪತ್ರ'!
ತೀರ ಕನಸಿಗಷ್ಟೇ ಬರ್ತಾ ಇದ್ದೋಳು, ಇತ್ತೇಚೆಗೆ ಒಂದೇ ಸಮನೆ ನೆನಪಾಗಿ ಕಾಡ್ತಾ ಇದೀಯಾ. ಮರೆಯಲು ಸಾಧ್ಯವಿಲ್ಲ ಅಂತ ಇಬ್ಬರಿಗೂ ಗೊತ್ತು! ನಿನ್ನ ಇಂಚಿಂಚೂ ಅರ್ಥಮಾಡಿಕೊಳ್ಳುವ ಪ್ರಯತ್ನದಲ್ಲಿ ಸಫಲನಾದೇನೆಂಬ ನಂಬಿಕೆಯಿದೆ. ತಲೆಯಲ್ಲಿ ಸಾವಿರ ಕನಸುಗಳಿವೆ ಹುಡುಗಿ, ಹೂಂ ಕಣೋ ಸಾದಿಸ್ತೀಯ ಅನ್ನೋಕೊಂದು ಜೀವ ಜೊತೆಗೆ ಬೇಕಿದೆ. ಸ್ಪೂರ್ತಿಯ ಸೆಲೆಯಾಗಿ, ಕನಸಿಗೆ ನೆಲೆಯಾಗಿ. ಸುಳ್ಳು ಹೇಳಿ ನಿನ್ನ ಪಡೆವ ಜರೂರತ್ತೇನೂ ಇಲ್ಲ, ಆದರೂ ಅಗತ್ಯ ಬಿದ್ರೆ ಆಗಸದಷ್ಟು ಸುಳ್ಳು ಹೇಳಿಯಾದರೂ ನಿನ್ನ ಪ್ರೀತಿಸ್ಲೇಬೇಕೆಂಬ ಹಟಕ್ಕೆ ಬಿದ್ದಿದೆ ಮನಸು. Convince ಮಾಡೋಕೆ ಆಗ್ದಿದ್ರೆ confuse ಮಾಡಬೇಕಂತೆ! - ಯಾರೋ ತಿಳಿದೋರು ಹೇಳಿರೋ ಮಾತು. ಸಮಯ ಸುಕಾಸುಮ್ಮನೆ ಕಳೆಯುತ್ತಿದೆ, ನಂಗೊತ್ತು Time ಬೇಕು ನಂಗೆ ಅಂತೀಯ ನೀನು; ಅದಕ್ಕೂ ಸಿದ್ದನಿದ್ದೇನೆ - ಎಷ್ಟಾದರೂ ಟೈಮ್ ತಗೋ ಆದ್ರೆ 'ನೀನು ನನ್ನೊಳು ಅಂತ ಬರವಸೆ ಕೊಡು!' ನಿನ್ನ ಕಣ್ಣಲ್ಲೇ ನನ್ನಿಡೀ ಜೀವನವನ್ನ ನೋಡಿಕೊಂಡು ಬಿಡ್ತೀನಿ, ಇದೊಂದು ಜನ್ಮ ಜತೆಗಿದ್ದುಬಿಡು.
ಬೊಗಸೆತುಂಬ ಪ್ರೀತಿ, ಕೆನ್ನೆಮೇಲಿನ ನಗು, ಕಂಗಳಲ್ಲಿ ಖುಷಿ ಮಾಯದಂತೆ ಕಾಯ್ದುಬಿಡುತ್ತೇನೆ, ನನ್ನಾಣೆ. ಸಿಕ್ತೀಯಾ ಅಂತಾದ್ರೆ - ಕಾಯ್ತೀನಿ ಕಣೆ - ಕಾಯೋದ್ರಲ್ಲೂ ಖುಷಿಯಿದೆ ಅಂದೋನು ನಾನು.
ನಿನ್ನ ಹಂಸ ಪಾದಕ್ಕೆ ಗೆಜ್ಜೆಕಟ್ಟಿಯಾಗಿದೆ, ಜಲಪಾತದ ಜಡೆಗೆ ಮಲ್ಲಿಗೆ ಮುಡಿಸಬೇಕೆಂಬ ಬಯಕೆ ಹೃದಯದಿಂದ ಇಣುಕುತ್ತಿದೆ!
ನೀನೆಷ್ಟು ಹತ್ತಿರವಿದ್ದೀಯೋ ಅಷ್ಟು ಖುಷಿಯಾಗಿರ್ತೀನಿ, ತೀರ ಪಕ್ಕದಲ್ಲೇ ಇರಬೇಕೆಂಬ ಬಯಕೆಯೇನಿಲ್ಲ. ನೀನಾಗಿಯೇ ಬಂದು ನನ್ನೆದೆಯಮೇಲೆ ತಲೆಯಿಟ್ಟು ವಿರಮಿಸಿದರೆ, ನನಗಾಗೋ ಖುಷಿಯ ಆ ಬಗವಂತ ಬಲ್ಲ! ಜೀವವೀಣೆ ಜಲ್ಲೆಂದ ಸದ್ದು ನಮ್ಮಿಬ್ಬರಿಗಷ್ಟೇ ಕೇಳಿಸಬೇಕು, ಅವತ್ತಿನ ಸಂಬ್ರಮಕ್ಕೆ ಹೃದಯ ಹಾಡಬೇಕು; ಒಮ್ಮೆ ಕಿವಿಯಿಟ್ಟು ನೋಡು, ಕೇಳು!
ನಾನ್ಯಾಕೆ ಸದಾ ಖುಷಿಯಾಗಿರ್ತೀನಿ ಗೊತ್ತೇನೆ? ನಿನ್ನ ಕಂಡ ದಿನದಿಂದ ನಾನು Happy Man :)
ನಾನಂತೂ ಪ್ರೀತ್ಸಿದ್ದೀನಿ, ನೀನು?-ಗೊತ್ತಿಲ್ಲ, ಹೋಗ್ಲಿ ಬಿಡು; Atleast ನಮ್ಮಿಬ್ಬರ ಈ ಪ್ರೀತಿಯನ್ನದ್ರೂ ಪ್ರೀತ್ಸಿಬಿಡು!
ಸುಮ್ನೆ ನಿನ್ನೆ ನೋಡ್ತಾ ಕೂತಿರಬೇಕು, ನೀನೇ ಒಂಥರಾ ಖುಷಿ - ಅದಕ್ಕೇ ಹೇಳಿದ್ದು ಜತೆಗಿರು ಅಂತ. ನೀನೊಂದು ನಗು ನಕ್ಕರೆ - ಹೃದಯದಲ್ಲಿ ಪ್ರಣತಿಯ ಹಚ್ಚಿಟ್ಟು ಪುಟ್ಟ ಮಗುವೊಂದು ನಡೆದು ಹೋದಂತ ಅನುಭವ! ನಿನ್ನದೊಂದು ಕಣ್ಣ ನೋಟದಲ್ಲಿ ಬಿಂಬವಾಗಿರ್ತೀನಲ್ಲ ಸಾಕು ಕಣೆ - ಆ ಕ್ಷಣಕ್ಕೆ ಜೀವನ ಸಾರ್ಥಕ. ಬಹುಷಃ ನೀನು ನಡೆವುದ ನೋಡಿ ಆಮೇಲೆ ಅದಕ್ಕೆ 'ವೈಯಾರ' ಅಂತ ಹೆಸರಿಟ್ಟರೆನೋ? I love the way you walk! ನಿನ್ನೆಡೆಗಿನ wow ಎಂದಿಗೂ ಕಮ್ಮಿಯಾಗಲಾರದು. ನಂಗೊತ್ತು ಇಂಥ ಪತ್ರವನ್ನ ನಾನು ಸಾವಿರ ಬರೆಯಬಲ್ಲೆ, ನಿನ್ನೆಡೆಗಿನ ಪ್ರೀತಿ ಆಮೇಲೂ ಉಳಿದಿರುತ್ತೆ, ಅಷ್ಟೂ ನಿಂಗೆ ಬರ್ದಿದ್ದು ಕಣೆ ಅದನ್ನ ನೀನೇ ತಿಳ್ಕೋಬೇಕು, ತೀರ ಅದಕ್ಕೂ ಸಮಜಾಯಷಿ ಕೇಳಬೇಡ! ಯಾವತ್ತಿಗೂ ನೀನು ನನ್ನ ಕುತೂಹಲ, ಅದೆಷ್ಟೇ ಹುಡುಕಿದರೂ, ನಿನ್ನೆಡೆಗಿನ ಅಧ್ಯಯನಾಸಕ್ತಿ ಕಡಿಮೆಯಾಗಲಾರದು. ನನ್ನ ನಿರಂತರ ತಪನೆಯನ್ನ ಆದಷ್ಟು ಬೇಗ ಪ್ರೀತಿ ಅಂತ ಒಪ್ಪಿಕೊಂಡುಬಿಡು.. ಹೇಗಿದ್ದೀಯೋ ಹಾಗೆ ಇರು - ಪ್ರೀತ್ಸು ಅಷ್ಟೇ!
- You don't have to be perfect; to be perfect for me :)
- ನಿನ್ನವ
ಮಂಗಳವಾರ, ಆಗಸ್ಟ್ 14, 2012
ಶುಕ್ರವಾರ, ಜೂನ್ 29, 2012
ಬೆಳೆಯುವ ಸಿರಿ ಮೊಳಕೆಯಲ್ಲಿ!
ಮೊದಲರ್ಧ ಫೇಸ್-ಬುಕ್ ನಿಂದ ಆಯ್ದುಕೊಂಡದ್ದು, ಇನ್ನರ್ಧ ಬೃಂದಾವನಂ ಚಿತ್ರದ್ದು! http://on.fb.me/Mf7n2i
ಹುಡುಕುತ್ತಾ ಹೋದ್ರೆ ಇಂತವೆಷ್ಟೋ! ಸಧ್ಯಕ್ಕೆ ನನಗೆ ಸಿಕ್ಕಿದ್ದು ಇದು :) 'ದಿಲ್ ಖುಷಿ'ಯಾಗಿರಿ...
ಶನಿವಾರ, ಜೂನ್ 16, 2012
ದೇಶ ಉದ್ಧಾರ ಆದಂಗೇ!
ಯಾರು ಹಿತವರು ನಮಗೆ?
ಯೂ.ಪೀ.ಎ(U'Pee'A) ತನ್ನ ಭಯಂಕರ ಮೀಟಿಂಗು ಮುಗಿಸಿ ಕೊನೆಗೂ ರಾಷ್ಟ್ರಪತಿ ಸ್ಥಾನಕ್ಕೆ ಅಭ್ಯರ್ಥಿಯನ್ನ ಆಯ್ಕೆ ಮಾಡಿ ಮುಗಿಸಿದೆ. ನಾನೀಗ ಹೋಗಿ ಅನೌನ್ಸ ಮಾಡ್ತೀನಿ ಸುಮ್ನೆ ನನ್ಹಿಂದೆ ನಿಂತ್ಗಂಡಿರು ಮೋಹನಾ ಅಂದಿರ್ಲಿಕ್ಕೆ ಸಾಕು ಇಟಲಿಯಮ್ಮ! ನಿರೀಕ್ಷೆಯಂತೆ ಹೀಗೆ ಆಯ್ಕೆಯಾದ ಅಭ್ಯರ್ಥಿ ಬೇರಾರೂ ಅಲ್ಲ; ಆತ ಪ್ರಣಬ್ ಮುಖರ್ಜಿ, ವಿತ್ತ ಸಚಿವ. ದೇಶದ ಆರ್ಥಿಕತೆ ನೆಲೆಕಚ್ಚಿ ಕುಳಿತಿರುವಾಗ ಸದರಿ ಹುದ್ದೆ ಅಲಂಕರಿಸಿರುವ ಇವರನ್ನ ದೇಶದ ಮಹೋನ್ನತ ಪದವಿಗೆ ಅಣಿಗೊಳಿಸುತ್ತಿರುವುದು ಹಾಸ್ಯಾಸ್ಪದ.ಅಂದಹಾಗೆ ಹಿಂದೊಮ್ಮೆ ಶ್ರೀಯುತರು ಚಾನ್ಸ್ ಕೊಡಿ ಅಂದಾಗ ಇಟಲಿಯಮ್ಮ ಟೈಮ್ ಬರ್ಲಿ ತಡ್ಯಪ್ಪ ಅಂದಿದ್ರು, ಕೊಟ್ಟಮಾತಿಗೆ ತಪ್ಪದೆ ಈಗ ಈ ನಿರ್ಧಾರಕ್ಕೆ ಬಂದಿರಬೇಕು! ಕಾಂಗ್ರೆಸ್ನಲ್ಲಿ ಡಿಸಿಷನ್ ಮೇಕಿಂಗ್ ಪವರ್ರು ಇಟಲಿಯಮ್ಮನ್ನ ಬಿಟ್ರೆ ಬೇರಾರಿಗೂ ಇಲ್ಲದ ಕಾರಣ ನೋ ಒಬ್ಜೆಕ್ಷನ್ :P
ಅಂದಹಾಗೆ ನಮ್ಮ ದೇಶದ ಪ್ರಧಾನ ಮಂತ್ರಿ, ಅಂದರೆ ಮನಮೋಹನ 'ಸಿಂಗಂ' ಅವರ ಹೆಸರೂ ಕೇಳಿಬಂದಿತ್ತು, ಅದೊಂತರ ಈಗ್ಲೇ ರಬ್ಬರ್ ಸ್ಟಾಂಪ್ ಆಗಿರೋದ್ರಿಂದ - ಇದ್ದಲ್ಲೇ ಇರ್ಲಿ ಅಂತ ಆಮೇಲೆ ಕೈಬಿಡಲಾಯ್ತು! ನಮ್ಮ ರಾಷ್ಟ್ರದ ಸದ್ಯದ ಸರ್ವೋಚ್ಚ ಹುದ್ದೆ ಮೇಲೆ ಕುಳಿತಿರುವ ಪ್ರತಿಭಾ ದೇವಿ ಸಿಂಗ ಪಾಟೀಲ ಅವ್ರು ಭೂಪಟದ ಯಾವ್ದೋ ಮೂಲೆಯಲ್ಲಿ ಪ್ರವಾಸ ನಿರತರಾಗಿದ್ದು, ಎಲ್ಲಾ ನಿಧಾನವಾಗಿ ಆಗ್ಲಿ ಬಿಡಿ ಅಲ್ಲೀವರ್ಗೂ 'ಮೇ ಔರ್ ಏಕ್ ರೌಂಡ್ ಮಾರ್ ಕೆ ಆವೂಂಗಿ' (ಇನ್ನೊಂದ್ ಬಾರಿ ಸುತ್ಕೊಂಡು ಬರ್ತೀನಿ) ಅಂತ ಮೆಸೇಜ್ ಕಳಿಸಿದ್ದಾರಂತೆ!
ಲೋಕಸಭೆಯ ಸ್ಪೀಕರ್ ಆಗಿದ್ದ ಸೋಮನಾಥ ಚಟರ್ಜಿ ಹೆಸರೂ ಹೀಗೆ ಬಂದು ಹಾಗೇ ಹೋಯ್ತು. ಆಮೇಲೆ ಯಾರೋ ಜೆ.ಡಿ.ಎಸ್'ನ ಕೃಷ್ಣ ಅನ್ನೋರು ದೂಳುಪುತ್ರ ದೇವೇಗೌಡ ಅವ್ರು ಸೂಕ್ತ ವ್ಯಕ್ತಿ ಕಣ್ರೀ ಅಂತ ದೊಡ್ಡ ಜೋಕೊಂದನ್ನು ತೇಲಿಬಿಟ್ರು. ರಾಮಕೃಷ್ಣ ಹೆಗಡೆ ಅವ್ರಿಗೆ ಸಿಗಬೇಕಿದ್ದ ಪ್ರಧಾನಿ ಹುದ್ದೇನಾ ಇವ್ರು ವಕ್ಕರಿಸಿದ್ದು ಯಾಕೋ ನೆನಪಾಗಿ ಬೇಸರವಾಯ್ತು :( ಇದ್ರ ಜತೆ ಯಾವ್ದೋ ಶಾಲೆಯ ಮೇಷ್ಟ್ರು ಒಬ್ರು ಗೌಡ್ರು ಹೋದರಂತೆ ಅಂತ ಮೌನಾಚರಣೆ ಮಾಡಿಸ್ಬಿಟ್ಟಿದ್ರಂತೆ - ಎಷ್ಟೋ ಜನ ಉಸ್ಸಪ್ಪ -ಕೊನೆಗೂ-ಅಂದೋರು, ಸುಳ್ಳು ಸುದ್ದಿ ಅಂತ ಗೊತ್ತಾಗಿ ಬೇಸರ ಪಟ್ರು ಅಂತ ವರದಿಯಾಗಿದೆ :P
ಮಮತಾಮಯಿಯ ತ್ರಣಮೂಲ ಮಾತ್ರ ಕಾದು ನೋಡ್ತೀನಿ ಅಂದದ್ದು, ಏನಾರ ಸಿಗತ್ತಾ(ರಾಜ್ಯಕ್ಕೆ!) ಅಂತ ನೋಡ್ಕ್ಯಂಡು ನಿರ್ಧಾರ ತಗೊಳ್ಳೋ ಸಾದ್ಯತೆಗಳು ದಟ್ಟವಾಗಿವೆ.ಇನ್ನು ಎಸ್ಪಿ ಎಂಬ ದೊಡ್ಡ(ದಡ್ದ) ಪಕ್ಷ ಪ್ರಸಾದ ಸ್ವೀಕರಿಸಿ ಪ್ರಣಬ್'ಗೆ ಜೈ ಅಂದುಬಿಟ್ಟಿದೆ. ಎಂಬಲ್ಲಿಗೆ ಇಟಲಿಯಮ್ಮನ ಮನೆಯ ಮಾಲಿಗಳೂ ಕೂಡ ಹೊಸಬಟ್ಟೆ ಹೊಲಿಸಿಕೊಂಡು ನಾವ್ ರೆಡಿ ಅನ್ನೋಕೆ ಹೋಗಿದ್ರಂತೆ. ಇತ್ತ ಮನಮೊಹನರು ಕೂಡ ತಮ್ಮ ಹೆಸರು ತೇಲಿಬಂದದ್ದು ಕೇಳಿ 'ಬಯಸದೆ ಬಳಿ ಬಂದೇ' ಹಾಡು ಹಾಡಿಕೊಂಡಿದ್ರಂತೆ. ಇದನ್ನ ಕೇಳಿ ಇಟಲಿಯಮ್ಮ ಮೋನು ಸುಮ್ನಿರಪ್ಪಾ, 2014ರ ವರೆಗೂ ಹಿಂಗೇ ಎಂಗೇಜ್ ಆಗಿರು ಅಂದಳಂತೆ! :P
ಮೈತುಂಬ ಹಗರಣ ಹೊತ್ತು ಹೆಣಗಾಡುತ್ತಿರುವ ಡಿ.ಎಂ.ಕೆ_ಯ ಕೊಂಗ ಕರುಣಾನಿಧಿ, ಹಮೀದ್ ಅನ್ಸಾರಿ ಓಕೆ ಕಣ್ರೀ ಅಂತ ಸುಮ್ನೆ ತಮಾಷೆಗೆ ಹೇಳಿತ್ತಾದ್ರು, ತಮ್ಮ ಮೇಲಿರೋ ಎಲ್ಲ ಕೇಸ್'ಗಳನ್ನ ವಸಿ ನೋಡ್ಕ್ಯಂಡ್ರೆ ನಿಮ್ಮ ಹಸಾನೇ ಮುಂದೆ ಹೋಗ್ಲಿ, ನಮ್ ಹೋರಿನೇ ಹಿಂದೆ ಬರುತ್ತೆ ಅಂತ ಹೇಳ್ಬಿಡ್ತಂತಪ್ಪ! ದೇಶ ಯಕ್ಕುಟ್ಟೋದ್ರು ಪರ್ವಾಗಿಲ್ಲ - ತಮ್ ಕೆಲ್ಸಾ ಆದ್ರೆ ಸಾಕು ಅಂತ ಎಲ್ಲ ರಾಜಕೀಯ ಪಕ್ಷಗಳೂ ಅನ್ಕೊಂಡಿರೋದಕ್ಕೆ 'ಪ್ರಣಬ್ ಯೂ ಆರ್ ಲಕ್ಕಿ'!
ಮಧ್ಯೆ ಕೇಳಿಬಂದ ಹೆಸರುಗಳು ದೇಶದ ಜನತೆಯನ್ನ ನಿಟ್ಟುಸಿರು ಬಿಡುವಂತೆ/ಉಸಿರಾಡುವಂತೆ ಮಾಡಿದ್ದವು. ಭಾರತದ ಟೆಲಿಕಾಂ ಪಿತಾಮಹ ಸ್ಯಾಮ್ ಪಿತ್ರೋಡಾ ಒಂದು ಒಳ್ಳೆ ಆಯ್ಕೆ ಆಗಬಹುದಿತ್ತು, ಹಾಗಾಗಲಿಲ್ಲ. ಆಮೇಲೆ ಇನ್ಫಿಯ ನಾರಾಯಣಮೂರ್ತಿ ಅವರ ಹೆಸರು ಚಾಲ್ತಿಗೆ ಬಂತು, ಅದೂ ಒಂದೇಟಿಗೆ ಓಕೆ ಅನ್ನೋಹಾಗಿತ್ತು. ಏನೇನೋ ಆಗಿ, ಕೊನೆಗೆ ಅವರನ್ನೇ ಮಾತಾಡಿಸಿದ್ರೆ ಅವೆಲ್ಲ ಇಲ್ಲ ಕಣ್ರೀ, ಈ ರಾಜಕಾರಣಿಗಳೇ ಸೂಕ್ತ ವ್ಯಕ್ತಿಯನ್ನ ಆಯ್ಕೆ ಮಾಡ್ಲಿ ಬಿಡಿ(ನಿಜಾನ !?) ನೀವೇಕೆ ಸುಮ್ನೆ ಇರುವೆ ಬಿಟ್ಗಂತೀರಾ ಅಂದ್ಬಿಟ್ರು!
ಸಭ್ಯ-ಸಜ್ಜನ ಮಾಜಿ ರಾಷ್ಟ್ರಪತಿ ಕಲಾಂ ಅವ್ರ ಹೆಸ್ರು - ಹಿಂದೆ ಅವ್ರನ್ನ ಆಯ್ಕೆ ಮಾಡಿದ್ದ ಏನ್.ಡಿ.ಎ ಪಾಳೆಯದಿಂದಲೇ ಕೇಳಿ ಬಂತು.ಅಬ್ಬ ಬಿ .ಜೆ.ಪಿ ಏನೋ ಒಳ್ಳೆ ಕೆಲ್ಸಾ ಮಾಡ್ತಿದೆ ಅಂತ ಜನ ಆಸೆ ಇಟ್ಗೊಂಡಿದ್ರು. ಆದ್ರೆ ವೋಟಿಂಗ್ ಲೆಕ್ಕಾಚಾರದ ಪ್ರಕಾರ ಕಲಾಂ ಗೆಲ್ಲೋದು ಕಷ್ಟ ಅಂತ ಅನ್ನಿಸಿ, ಅದೀಗ ದಿಕ್ಕೆಟ್ಟು ಕುಳಿತಿದೆ. ಇತರ ಪಕ್ಷಗಳು ತಮ್ಮ ಬೇಳೆ ಬೇಯಿಸಿಕೊಳ್ಳೋ ಆಲೋಚ್ನೆ ಬಿಟ್ಟು ಸುಮ್ನೆ ಕಲಾಂ'ಗೆ ಬೆಂಬಲ ಸೂಚಿಸಿದರೆ ರಾಷ್ಟ್ರಕ್ಕೆ - ಜನಕ್ಕೆ ತುಂಬಾ ಒಳ್ಳೆಯದು. ಅತ್ತ ಬೇಸತ್ತು ಕಲಾಂ, ವಿತ್ತ ಸಚಿವರ ವಿರುದ್ದ ನಾನು ನಿಲ್ಲೋದಿಲ್ಲ ಬಿಡಿ ಅಂತಿದಾರೆ. ಭವ್ಯ ಭಾರತ ದೇಶದ ಜನರ ರಕ್ತ ಕುದಿಯುವ ಬದಲು, ತಣ್ಣಗಾಗಿ ಬಿಟ್ಟಿರುವುದು ಮಾತ್ರ ವಿಪರ್ಯಾಸ :(
ಓದಿದ ನೀವು - ಅಭಿಪ್ರಾಯ ಹಂಚಿಕೊಳ್ಳಿ, ಮಿತ್ರರಿಗೆ ಕೊಟ್ಟು ಓದ್ಸಿ, like/share ಮಾಡಿ. ಒಟ್ಟಾರೆ ಏನು ಒಳ್ಳೇದು ಅನ್ಸುತ್ತೋ ಅದನ್ನ ಮಾಡಿ!
- ಪ್ರಸಾದ್
ಇದಕ್ಕೆ ಸಬ್ಸ್ಕ್ರೈಬ್ ಆಗಿ:
ಪೋಸ್ಟ್ಗಳು (Atom)