ಶುಕ್ರವಾರ, ಮಾರ್ಚ್ 4, 2011

ಹನಿಗವಿತೆಗಳು

ಹನಿಗವಿತೆಗಳು/ಹೈಕುಗಳು

1)ಪಾರು

ಕೈಯ ಕೊಟ್ಟಳು ಹುಡುಗಿ
ಕಂಗೆಟ್ಟ  ಹುಡುಗ,
ಅಯ್ಯೋ ಎಲ್ಲ ಮುಗಿದೇ
ಹೋಯಿತೆಂದರು ಜನ.
ಅಸಲಿಗೆ ಹುಡುಗ ಬಚಾವಾಗಿದ್ದ!

2)ಜೀವ

ಅಕ್ವೆರಿಯಮ್ಮಿನಿಂದ
ಚಿಮ್ಮಿದ  ಮೀನು
ಹೊರಗೆ ಏನು ಇಲ್ಲವೆಂಬ
ಸತ್ಯವ ಅರಿತು
ಮತ್ತೆ ನೀರಿಗೆ ಹಾರಿತು!

3)ಸೌಂದರ್ಯ ಪ್ರಜ್ಞೆ

ಬ್ಯೂಟಿ - ಪಾರ್ಲರಿನಿಂದ 
ಬಂದ ಬೆಡಗಿಯ
ಕೈಯ ಹಿಡಿದು
ಮೊಮ್ಮಗ
ಮನೆಗೆ ಕರೆದೊಯ್ದ!

4)ಗಡಿಯಾರ

ವರ್ಷಗಟ್ಟಲೆ  ತಿರುಗಿತು
ಗಡಿಯಾರದ ಮುಳ್ಳು,
ಎಷ್ಟು ಸುತ್ತಿದರೂ
ತಲುಪಿದ್ದು ಮೊದಲಿದ್ದಲ್ಲಿಗೇ
ಎನಿಸಿರಬೇಕು ಪಾಪ!...
ಸ್ತಬ್ಧವಾಯಿತು!

ಈ ಕವನಗಳು ಶಿರಸಿಯ ವೆಬ್ಸೈಟ್ ನಲ್ಲಿ ಕೂಡ ಪ್ರಕಟಗೊಂಡಿವೆ-
ಲಿಂಕ್ ಈ ಕೆಳಗಿನಂತಿದೆ ಬೆಟ್ಟಿ ಕೊಡಬಹುದು -

http://sirsi.in/kannada/index.php?option=com_content&view=article&id=250:2011-03-06-12-10-17&catid=38:blog2&Itemid=66

21 ಕಾಮೆಂಟ್‌ಗಳು:

  1. ಪರವಾಗಿಲ್ಲ ಚೆನ್ನಾಗಿ ಬರಿತೀಯ, ಮುಂದುವರೆಸು !

    ಪ್ರತ್ಯುತ್ತರಅಳಿಸಿ
  2. ನನ್ನ ಬರವಣಿಗೆಯ ಕುರಿತು ನೀವು ನೀಡಿರುವ ಅಭಿಪ್ರಾಯ ಸಂತಸ ತಂದಿದೆ, ಹಾಗು ನಿಮ್ಮ ಸಲಹೆ ಸೂಚನೆಗಳನ್ನ ಅನುಸರಿಸಿ ಮುನ್ನಡಿ ಇಡುತ್ತೇನೆ.
    ಗುರುಪ್ರಸಾದ್, ಪ್ರಮೋದ್, ಮತ್ತು ಶ್ರೀನಿವಾಸ್ ತಮಗೆ ಧನ್ಯವಾದಗಳು.

    ಪ್ರತ್ಯುತ್ತರಅಳಿಸಿ
  3. All was woderfull but i like 2nd one most its very meaning full and nice....... good yar all the best ........

    ಪ್ರತ್ಯುತ್ತರಅಳಿಸಿ
  4. ಡಾ.ಈಶ್ವರ ಶಾಸ್ತ್ರಿ ಮೋಟಿನಸರ ಅವರೇ ಧನ್ಯವಾದಗಳು, ನಿಮ್ಮ ಪ್ರೋತ್ಸಾಹದಿಂದ ಬರೆವ ಉತ್ಸಾಹ ಇಮ್ಮಡಿಗೊಂಡಿದೆ..

    ಪ್ರತ್ಯುತ್ತರಅಳಿಸಿ
  5. Superb pa hero...Being an software engg u hav so much patience to write all these things...this is appreciated man..Keep going

    ಪ್ರತ್ಯುತ್ತರಅಳಿಸಿ
  6. ತು೦ಬಾ ಚೆನ್ನಾಗಿ ಬರೆಯುತ್ತೇಯ. ಇದನ್ನೇ ಮು೦ದುವರೆಸು. ನಿನ್ನ ಪ್ರತಿಭೆ ಬೆಳೆದು ಹೆಮ್ಮರವಾಗಲಿ.

    ಪ್ರತ್ಯುತ್ತರಅಳಿಸಿ