ಪಾರ್ಕಿನ ಬೆಂಚಿನ ಮೇಲೆ 
ಕುಳಿತು 'ಪ್ರಥಮ -
ಚುಂಬನವ' ಸವಿದೆವಲ್ಲ,
ಗುಲಾಬಿ ಗಿಡ   
ಹೂ - ಬಿಟ್ಟಿದೆ! 
ಡೌಟು ಮತ್ತೇನಿಲ್ಲ ಕಣೆ,
 ಈ ಸುದ್ದಿ ತಲುಪಿಸಿದ
ಪಾರ್ಕಿನ ಮಾಲಿ ಕೂಡ
ನಮ್ಮ ನೋಡಿದ್ದನಾ?
"ಯಾರೂ ಇಲ್ಲ ಕಣೋ"
ಅಂದ ನೀನೇ ದಡ್ಡಿ..!
ಆಸಾಮಿ ಸಾಕ್ಷಿಗೆಂಬಂತೆ
ಹೂ ಸಮೇತ ಮನೆಗೇ ಬಂದಿದ್ದ.
ಪಾಕೆಟ್ ಮನಿ-ಎಲ್ಲ ಸರಿಹೋಯ್ತು,
ಜಗುಲಿಯಲ್ಲಿದ್ದ ಅಪ್ಪ -
"ಏನೋ..?" ಅನ್ನೋ ಹೊತ್ತಿಗೆ
ಅವನ್ನ ಕಳಿಸಬೇಕಿತ್ತಲ್ಲ... :(
ಚಿಂತೆ ಮತ್ತೇನಿಲ್ಲ ಕಣೆ,
ಇನ್ನೆಷ್ಟು ಹೂ ಬಿಡತ್ತೋ ಆ ಗಿಡ?
ಆಗಲೇ ಮೊಗ್ಗು ಬಿಟ್ಟಿದೆ 
ಎಂಬ ವರ್ತಮಾನವಿದೆ..
ಈ ವೀಕೆಂಡು 'ಪಾರ್ಕಿನ
- ಬೆಂಚಿಗೆ' ಪುನಃ ಬಂದುಬಿಡು!
                           - ನಿನ್ನವ..!

 
 
superrro superrrrru guru...... onde sarige ista agoytu kavna..... matte baritiri....
ಪ್ರತ್ಯುತ್ತರಅಳಿಸಿDear Pravara.. Thank you.
ಅಳಿಸಿI have been to your blog..its cool :)
channagide guru
ಪ್ರತ್ಯುತ್ತರಅಳಿಸಿThank you Vidya :)
ಅಳಿಸಿತುಂಬಾನೇ ಇಷ್ಟ ಆತು ಗುರು... ನಿಮ್ಮ ಬ್ಲಾಗ್ ಪಾರ್ಕ್ ನ ತುಂಬಾ ಇಂತಹದೆ ಗುಲಾಬಿಗಳು ಅರಳಲಿ...
ಪ್ರತ್ಯುತ್ತರಅಳಿಸಿ