
ತಪ್ಪು ನಂದೇ ಕಣೆ,
ನಾನು ಪ್ರೀತಿಸುವಾಗ
ಯೋಚಿಸಲಿಲ್ಲ;
ನೀನು ಪ್ರೀತಿಸಲಿಲ್ಲ
ಕೇವಲ ಯೋಚಿಸಿದೆ!
೨)
ಸಾಗರದ ಹೆಬ್ಬಂಡೆಗೆ
ಅಲೆಯೆಡೆಗಿನ ಪ್ರೀತಿ

ಕಡಿಮೆಯಾಗಿಲ್ಲ!
ಹುಡುಗಿಯರೇ,
ಅಲೆಯಂತೆ ನೀವೆಷ್ಟೇ
ಅಪ್ಪಳಿಸಿದರೂ;
ಹುಡುಗರು -
ಮತ್ತವರ ಪ್ರೀತಿಯೂ,
ಬಂಡೆಯಂತೆಯೇ,
'ಅಚಲ'

೩)
ಮೊನ್ನೆ ಸಂಜೆ,
ನವಿಲು ಗರಿಬಿಚ್ಚಿ
ಕುಣಿವ ಸಮಯಕೆ
ನೀನು ನೆನಪಾಗಿದ್ದೆ.

೪)
ಬಿದ್ದ ಮಳೆಹನಿ ಕೂಡ
ಸದ್ದಿಲ್ಲದೆಯೇ -
ಕೊಚ್ಚಿ ಹೋಯಿತು
ನನ್ನ ಕಣ್ಣೀರಂತೆ

ತುಂಬಾ ದಿನವಾಯ್ತು
ಅಂತ ಮಾಮೂಲು
ಜಾಗಕ್ಕೆ ಬಂದೆ,
ನೀನು ಬರಲಿಲ್ಲ!

೬)
ನಮ್ಮ ಕಾಂಪೌಂಡಿನ
ಗುಲಾಬಿ ಮನದುಂಬಿ
- ನಗುತ್ತಿದೆ,
ನಿನ್ನ ಕಂಡಿರಬೇಕು!
- ಪ್ರಸಾದ್